ಯಶ್ ಮತ್ತು ಎ. ಹರ್ಷ ಸಮಾಗಮದಲ್ಲಿ `ರಾಣಾ'
Posted date: 10 Wed, Aug 2016 – 08:15:58 AM

ನೃತ್ಯ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡುತ್ತಾ, ಜೊತೆಜೊತೆಗೇ ನಿರ್ದೇಶಕರಾಗಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ಎ. ಹರ್ಷ. ಗೆಳೆಯ, ಬಿರುಗಾಳಿ, ಭಜರಂಗಿ, ವಜ್ರಕಾಯ ಮತ್ತು ಮಾರುತಿ ೮೦೦ ಸಿನಿಮಾಗಳನ್ನು ನೀಡಿರುವ ಹರ್ಷ ಒಂದು ಸಿನಿಮಾ ಬಿಡುಗಡೆಯಾಗುತ್ತಿದ್ದಂತೇ ಮತ್ತೊಂದು ಸಿನಿಮಾವನ್ನು ಘೋಷಿಸುತ್ತಾರೆ. ಹೀಗಿರುವಾಗ `ಮಾರುತಿ ೮೦೦' ಗೆಲುವಿನ ನಂತರ ಹರ್ಷ ನಿರ್ದೇಶನದ ಚಿತ್ರ ಯಾವುದು ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು.
ಅಂತೆಯೇ ರಾಕಿಂಗ್ ಸ್ಟಾರ್ ಯಶ್ ಮತ್ತು ಹರ್ಷ ಒಟ್ಟುಸೇರಿ ಯಾವಾಗ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಕೂಡಾ ಅನೇಕರದ್ದಾಗಿತ್ತು. ಈಗ ಅದಕ್ಕೆಲ್ಲ ಉತ್ತರವೆಂಬಂತೆ ಹರ್ಷ ನಿರ್ದೇಶನದಲ್ಲಿ ಯಶ್ ನಟಿಸುತ್ತಿದ್ದಾರೆ. ಈ ಚಿತ್ರದ ಹೆಸರು `ರಾಣಾ'. ಜನವರಿ ೮, ೨೦೧೭ರಂದು ಯಶ್ ಹುಟ್ಟು ಹಬ್ಬದ ದಿನ `ರಾಣಾ' ಚಿತ್ರದ ಮುಹೂರ್ತ ನೆರವೇರಲಿದೆ.
ಈ ಹಿಂದೆ ನಂದ ಲವ್ಸ್ ನಂದಿತ, ಭಾಗ್ಯದ ಬಳೆಗಾರ ಮತ್ತು ಮರಿಟೈಗರ್ ಸಿನಿಮಾಗಳನ್ನು ನಿರ್ಮಿಸಿದ್ದ ಸಿಂಹಾದ್ರಿ ಪ್ರೊಡಕ್ಷನ್ಸ್‌ನ ರಮೇಶ್ ಕಶ್ಯಪ್ ಅವರು `ರಾಣಾ' ಚಿತ್ರವನ್ನು ನಿರ್ಮಿಸಲಿದ್ದಾರೆ. `ರಾಣಾ' ಚಿತ್ರಕ್ಕೆ ಎ. ಹರ್ಷ ಅವರೇ ಕಥೆ, ಚಿತ್ರಕತೆ, ನಿರ್ದೇಶನದ ಜೊತೆಗೆ ನೃತ್ಯನಿರ್ದೇಶನವನ್ನೂ ಮಾಡಲಿದ್ದಾರೆ.
ಯಶ್ ನಟನೆ ಮತ್ತು ಎ. ಹರ್ಷ ನಿರ್ದೇಶನ ಎಂದಮೇಲೆ ಆಕ್ಷನ್, ಸೆಂಟಿಮೆಂಟ್, ಅದ್ಭುತವಾದ ಹಾಡುಗಳು, ಸುಂದರವಾದ ಚಿತ್ರೀಕರಣ ಎಲ್ಲವೂ ಇದ್ದಿದ್ದೇ. ಅದ್ದೂರಿ ತಾರಾಗಣ ಮತ್ತು ಶ್ರೀಮಂತಿಕೆ `ರಾಣಾ' ಚಿತ್ರದಲ್ಲಿ ಒಳಗೊಳ್ಳಲಿದೆ.
ವರಮಹಾ ಲಕ್ಷ್ಮಿ ಹಬ್ಬದ ಈ ಸಂದರ್ಭದಲ್ಲಿ `ರಾಣಾ' ಚಿತ್ರದ ಘೋಷಣೆಯಾಗಿರುವುದು ಯಶ್ ಮತ್ತು ಎ. ಹರ್ಷ ಅಭಿಮಾನಿಗಳ ಪಾಲಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. `ರಾಣಾ' ಆರಂಭಗೊಳ್ಳಲು ಯಶ್ ಹುಟ್ಟುಹಬ್ಬದ ದಿನದ ತನಕ ಕಾಯಬೇಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed